‘‘ಇವನ್ಯಾರವ... ಇವನ್ಯಾರವ... ಎನ್ನದಿರಯ್ಯ. ಇವ ನಮ್ಮವ... ಇವ ನಮ್ಮವ... ಎಂದೆಣಿಸಯ್ಯ ಕೂಡಲ ಸಂಗಮದೇವ’’
ಬುದ್ಧ ಬೌದ ಧರ್ಮವನ್ನು ಸ್ಥಾಪಿಸಿದ, ಮಹಾವೀರ ಜೈನ ಧರ್ಮ ಸ್ಥಾಪಿಸಿದಾಗೆ ಬಸವಣ್ಣ ಲಿಂಗಾಯತ ಧರ್ಮವನ್ನು ಸ್ಥಾಪಿಸಿದ ಎಂದು ಸುಪ್ರೀಂಕೋರ್ಟ್ ಆದೇಶದಲ್ಲಿಯೇ ತಿಳಿಸಿದೆ. ಲಿಂಗಾಯತ ಧರ್ಮವು ಜನನ ದಿಂದ ಯಾರನ್ನೂ ಮೇಲು ಕೀಳೆಂದುಅಳೆಯದೆ 'ಹೊಲೆ ಗಂಡಲ್ಲದೆ ಪಿಂಡದ ನೆಲೆಗೆ ಅಶ್ರಯವಿಲ್ಲ ಎಂದು ಸಾರಿ; 'ಮರೆತವನು ಮಾನವ, ಅರಿತವನು ಶರಣ' ಎಂದುಬೋದಿಸುವುದು, ಮರೆತ ಮಾನವನು ಅರಿತ ಶರಣ ನಾಗಲಿಕ್ಕೆ ಬೇಕಾಗುವ ದೀಕ್ಷಾಸಸ್ಕಾರವನ್ನು, ಪೂಜೆಯ ಸ್ವಾತಂತ್ರ್ಯವನ್ನುಎಲ್ಲರಿಗೂ ನೀಡಿದ್ದು ಲಿಂಗಾಯತ ಧರ್ಮ. ನಮ್ಮ ಪಕ್ಕದ ರಾಜ್ಯ ಮಹಾರಾಷ್ಟ್ರದಲ್ಲಿ ಲಿಂಗಾಯತ ಧರ್ಮದವರು ವಿಸಲಾತಿಯನ್ನು ಪಡೇಯುತ್ತಿದ್ದಾರೆ ಅದರೆ ಕರ್ನಾಟಕದಲ್ಲಿ ಇಲ್ಲ. ಸರ್ಕಾರದ ಅಂಕಿ ಆಂಶದ ಪ್ರಕಾರ ಇಂದು 85 ಜಾತಿ ಹಾಗೂ 350 ಉಪಜಾತಿಗಳನ್ನು ಹೊಂದಿರುವ ಲಿಂಗಾಯತ ಧರ್ಮಕ್ಕೆ ಒಂದು ಸ್ವತಂತ್ರ ಮಾನ್ಯತೆ ಅಗತ್ಯವಿದೆ.

-ದ್ಯಾವನೂರು ಮಂಜುನಾಥ್

ಲಿಂಗಾಯತ ಎಂದರೇನು?

     ಲಿಂಗಾಯತ ಧರ್ಮವು ಭಾರತದ ಒಂದು (ಸ್ವತಂತ್ರ ?)ಧರ್ಮವಾಗಿದ್ದು ಲಿಂಗಾಯತ ಪದವು ಎರಡು ಪದಗಳ ಸಂಯೋಜನೆಯಾಗಿದೆ. "ಲಿಂಗ" + "ಆಯತ" = "ಲಿಂಗಾಯತ" ಅಂದರೆ, ಲಿಂಗ (ಇಷ್ಟಲಿಂಗ) ವನ್ನು ಯಾರು ಗುರುವಿನ ದೀಕ್ಷೆ ಮುಖಾಂತರ ಆಯತ (ಧರಿಸಿಕೊಳ್ಳು) ಮಾಡುವರೋ ಅವರು ಲಿಂಗಾಯತರು.
     ಇಷ್ಟಲಿಂಗ ಮತ್ತು ಇಷ್ಟಲಿಂಗ ಶಬ್ದ 12ನೆಯ ಶತಮಾನಕ್ಕಿಂತ ಮೊದಲು ಇದ್ದ ಯಾವ ಐತಿಹಾಸಿಕ ದಾಖಲೆಗಳ ಇದುವರೆಗೂ ದೊರೆತಿಲ್ಲ, ಮೊದಲು ಇದ್ದದ್ದು ಶಿವಲಿಂಗ ಮಾತ್ರ. 

"ಆದಿ ಬಸವಣ್ಣ ಅನಾದಿ ಲಿಂಗವೆಂಬರು, ಹುಸಿ ಹುಸಿ ಈ ನುಡಿಯ ಕೇಳಲಾಗದು,
ಆದಿ ಲಿಂಗ, ಅನಾದಿ ಬಸವಣ್ಣನು! ಲಿಂಗವು ಬಸವಣ್ಣನ ಉದರದಲ್ಲಿ ಹುಟ್ಟಿತ್ತು,
ಜಂಗಮವು ಬಸವಣ್ಣನ ಉದರದಲ್ಲಿ ಹುಟ್ಟಿತ್ತು, ಪ್ರಸಾದವು ಬಸವಣ್ಣನನುಕರಿಸಲಾಯಿತ್ತು,
ಇಂತೀ ತ್ರಿವಿಧಕ್ಕೆ ಬಸವಣ್ಣನೇ ಕಾರಣನೆಂದರಿದೆನಯ್ಯಾ ಕೂಡಲಚೆನ್ನ ಸಂಗಮದೇವಾ."

- ಚೆನ್ನ ಬಸವಣ್ಣ

     ಲಿಂಗ, ಜಂಗಮ ಪ್ರಸಾ, ಬಸವಣ್ಣವರ ಹೃನ್ಮಂದಿರದಲ್ಲಿ ರೂಪಗೊಂಡವು ಎಂದು ಚನ್ನಬಸವಣ್ಣನವರು ತಮ್ಮ ವಚನದಲ್ಲಿ ಸ್ಪಷ್ಟವಾಗಿ ತಿಳಿಸದ್ದಾರೆ.